ರಾಜ್ಯದಲ್ಲಿ ಸಿಹಿ ನೀರಾ ಇಳಿಸಲು ಅನುಮತಿ ನೀಡಿದ ಸರ್ಕಾರ

By Editor
04:03:38 AM / Sun, Jan 21st, 2018

ರಾಜ್ಯದಲ್ಲಿ ನೀರಾ ಇಳಿಸಲು ಅನುಮತಿ ನೀಡಬೇಕು ಎಂದು 18 ವರ್ಷದಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. 2016ರ ಬೆಳಗಾವಿ ಅಧಿವೇಶದಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದ ‘ನೀರಾನೀತಿ’ಗೆ ನ.20ರಂದು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ತೆಂಗು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.

ಅಬಕಾರಿ ಲಾಬಿಯ ನಡುವೆಯೂ ನೀರಾ ಇಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ತೆಂಗು ಉತ್ಪಾದನಾ ಕಂಪನಿ, ರೈತ ಉತ್ಪಾದನಾ ಕಂಪನಿ ಮೂಲಕ ನೀರಾ ಉತ್ಪಾದಿಸಬಹುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅರ್ಹರಿಗೆ ರಾಜ್ಯ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ಸಿಗಲಿದೆ.

2015ರ ಬಜೆಟ್​ನಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಇಳಿಸಲು ಅನುಮತಿ ನೀಡುವುದಾಗಿ ರಾಜ್ಯ ಸರ್ಕಾರ ಘೊಷಿಸಿತ್ತು. 2016ರ ಬೆಳಗಾವಿ ಅಧಿವೇಶನದಲ್ಲಿ ರ್ಚಚಿಸಿ, ಅಬಕಾರಿ ಕಾಯ್ದೆಗೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿತ್ತು.

ಆದರೆ, ಕುಣಿಗಲ್ ಮೂಲದ ರೈತರೊಬ್ಬರು ನೀತಿ ಜಾರಿ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಅಂತಿಮ ಅಧಿಸೂಚನೆ ಬರುವುದು ನಾಲ್ಕೈದು ತಿಂಗಳು ತಡವಾಗಿದೆ. ರಾಜ್ಯದಲ್ಲಿ ನೀರಾಗೆ ಅನುಮತಿ ನೀಡಿದರೆ ಸಂಕಷ್ಟದಲ್ಲಿರುವ ರೈತನಿಗೆ ವರದಾನವಾಗಲಿದೆ ಎಂಬುದು ಪ್ರಗತಿಪರ ತೆಂಗು ಬೆಳೆಗಾರರ ಅಭಿಪ್ರಾಯ. 2014ರಲ್ಲಿ ಕೇರಳದಲ್ಲಿ ಸಿಹಿ ನೀರಾ ನೀತಿ ಜಾರಿಗೆ ಬಂದಿದೆ. ಆ ನಂತರದಲ್ಲಿ ಅಲ್ಲಿನ ತೆಂಗು ಬೆಳೆಗಾರರ ಬದುಕೇ ಬದಲಾಗಿದೆ.

ನೀರಾ ಇಳಿಸುವುದರಿಂದ ಬೆಲ್ಲ, ಸಿರಪ್, ಚಾಕೋಲೇಟ್ ಇತ್ಯಾದಿ ಸಿಹಿ ಉತ್ಪನ್ನಗಳನ್ನು ತಯಾರಿಸಬಹುದು. ಜಿಲ್ಲೆ ಯಲ್ಲಿ ಈಗಾಗಲೇ ಎಂಟು ತೆಂಗು ಉತ್ಪನ್ನ ಕಂಪನಿಗಳು ಸ್ಥಾಪನೆ ಯಾಗಿದ್ದು, ನೀರಾಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಸವಾಲು ಇದೆ. ಆಯುರ್ವೆದದಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ರಾಜ್ಯದಲ್ಲಿ 1951ರಲ್ಲಿ ಮೊದಲ ಬಾರಿಗೆ ನೀರಾ ಉತ್ಪಾದಿಸಲಾಯಿತು. 167 ಪಟ್ಟಣ ಹಾಗೂ 152 ಪ್ರಮುಖ ಗ್ರಾಮೀಣ ಭಾಗಗಳಲ್ಲಿ ನೀರಾ ಮಾರಾಟ ಕೇಂದ್ರ ಸ್ಥಾಪನೆಯಾಗಿತ್ತು.

Leave A Comment

   

ತುಮಕೂರು ಜಿಲ್ಲಾ ಸುದ್ಧಿಗಳು

News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018
News Tag

News Name

News Name

By Editor
04:03:38 AM / Sun, Jan 21st, 2018