ಚೆನ್ನೈ

ಕಾವೇರಿ ಗಂಗೆಗಿಂತಲೂ ಕಲುಷಿತ!

By Editor
04:06:57 AM / Sun, Jan 21st, 2018

ದೇಶದ ಪ್ರಮುಖ ನದಿಗಳಿಗೆ ಹೋಲಿಸಿದರೆ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ಕಡಿಮೆ, ಆದರೆ ನದಿ ಒಡಲಲ್ಲಿ ಅಪಾಯಕಾರಿ ರಾಸಾಯನಿಕಗಳ ಕಲ್ಮಷ ಮಾತ್ರ ಭಯಂಕರ. ಇದು ಕಾವೇರಿ ನದಿಯ ಸ್ಥಿತಿ. ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯವು ನಡೆಸಿದ ಸರಕಾರಿ ಪ್ರಾಯೋಜಿತ ಅಧ್ಯಯನದಲ್ಲಿ ಈ ಕಳವಳಕಾರಿ ಸಂಗತಿ ತಿಳಿದುಬಂದಿದೆ.

ಕಾವೇರಿಯಿಂದ ಪ್ರತಿ ವರ್ಷ 8.3 ಕ್ಯೂಬಿಕ್‌ ಕಿಲೋಮೀಟರ್‌ ನದಿ ನೀರು ಸಾಗರ ಸೇರುತ್ತಿದೆ. ಇದರ ಪ್ರತಿ ಲೀಟರ್‌ ನೀರಿನಲ್ಲಿ ಒಟ್ಟು ಕರಗುವ ಘನವಸ್ತುಗಳ (ಟಿಡಿಎಸ್‌) ಮಟ್ಟ 753 ಮಿಲಿಗ್ರಾಂ ತಲುಪಿದೆ. ಇದು ಗಂಗಾ ನದಿಯ ಟಿಡಿಎಸ್‌ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚು ಎಂದು ಇದೇ ಡಿಸೆಂಬರ್‌ 9ರಂದು ಬಿಡುಗಡೆಗೊಂಡ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ.

ಪವಿತ್ರ ಕಾವೇರಿಯ ಒಡಲು ಕಲ್ಮಷಗೊಳ್ಳಲು ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ಪಾಪದ ಪಾಲಿದೆ. ಮೇಕೆದಾಟು, ಶ್ರೀರಂಗಪಟ್ಟಣ, ಕಂಡಿಯೂರು, ಅಪ್ಪಕುದಥನ್‌, ಪನ್ನವಾಡಿ ಮತ್ತು ರುದ್ರಪಟ್ಟಣ ಸೇರಿದಂತೆ ಇನ್ನು ಹಲವು ಕಡೆಯ ಅಂತರ್ಜಲ ರಾಸಾಯನಿಕಗಳಿಂದ ಹದಗೆಟ್ಟಿದ್ದು ಅದು ನದಿಯ ಒಡಲು ವಿಷಯುಕ್ತಗೊಳ್ಳಲು ಕಾರಣ. ಇದರಿಂದ ಕಾವೇರಿ ನೀರು ನೀರಾವರಿ ಹಾಗೂ ಕುಡಿಯಲು ಅನರ್ಹಗೊಳ್ಳುತ್ತಿದೆ ಎಂದು ಎಚ್ಚರಿಸಿದೆ.

ಈ ಪುಣ್ಯನದಿಯ ಪಾತ್ರದಲ್ಲಿ ತಲೆ ಎತ್ತಿರುವ ಟೆಕ್ಸ್‌ಟೈಲ್‌, ಬಣ್ಣ ಹಾಕುವ ಉದ್ಯಮಗಳು (ಡೈಯಿಂಗ್‌), ಸಿಮೆಂಟ್‌ ಮತ್ತು ರಾಸಾಯನಿಕ ಕಾರ್ಖಾನೆಗಳು ಟನ್‌ಗಟ್ಟಲೆ ವಿಷಯುಕ್ತ ಘನ ತ್ಯಾಜ್ಯಗಳನ್ನು ನದಿ ನೀರಿಗೆ ಸೇರಿಸುತ್ತಿವೆ ಎಂದು ವರದಿ ಅಪಾಯದ ಮೂಲವನ್ನು ಶೋಧಿಸಿದೆ.

ಕರ್ನಾಟಕದ ತಲಕಾವೇರಿಯಲ್ಲಿ ಜನಿಸುವ ನದಿ ತಮಿಳುನಾಡಿನ ಪೂಂಪುಹಾರ್‌ವರೆಗೆ ಸಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 800 ಕಿ.ಮೀ ಉದ್ದಕ್ಕೂ ನದಿಯ ಇಕ್ಕೆಲಗಳಲ್ಲಿ ಆವರಿಸಿರುವ ಅಪಾಯಕಾರಿ ಮಾನವ ಚಟುವಟಿಕೆಗಳನ್ನು ಕೇಂದ್ರೀಕರಿಸಿ ಈ ಅಧ್ಯಯನ ನಡೆಸಲಾಗಿದೆ.

ಇತರೆ ನದಿಗಳಿಗೆ ಹೋಲಿಸಿದರೆ ವಿಶೇಷವಾಗಿ ಉದ್ಯಮ ವಲಯದ ಸಮೀಪ, ಕರಾವಳಿ ಮತ್ತು ಉಪ ನದಿಗಳ ಸಂಗಮ ತಾಣದಂತಹÜ ಕಡೆಗಳಲ್ಲಿ ಕಾವೇರಿಯ ನೀರಿನಲ್ಲಿ ಸೋಡಿಯಂ, ಕ್ಲೋರಿನ್‌ನಂತಹ ಅಯಾನುಗಳ ಪ್ರಮಾಣ ಅತಿ ಹೆಚ್ಚಾಗಿ ಕಾಣಿಸಿದೆ.

Leave A Comment

ರಾಷ್ಟ್ರೀಯ ಸುದ್ಧಿಗಳು

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
04:06:57 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
04:06:57 AM / Sun, Jan 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
04:06:57 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
04:06:57 AM / Sun, Jan 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
04:06:57 AM / Sun, Jan 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
04:06:57 AM / Sun, Jan 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017