ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಸೋನು ಪಂಜಾಬನ್ ಬಂಧನ


By Editor
03:57:13 AM / Sun, Jan 21st, 2018

ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಗೀತಾ ಆರೋರ ಅಲಿಯಾಸ್ ಸೋನು ಪಂಜಾಬನ್ ಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರು ತಿಂಗಳ ಕಾಲ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಕೊನೆಗೂ ಸೋನು ಪಂಜಾಬನ್ ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಶನಿವಾರವೇ ಆಕೆಯನ್ನು ಬಂಧಿಸಿದ್ದು ಎಸಿಪಿ ಸಂದೀಪ್ ಲಾಂಬಾ ನೇತೃತ್ವದ ತಂಡ ಕ್ರೈಂ ಬ್ರಾಂಚ್ ಸೈಬರ್ ಸೆಲ್ ಕಚೇರಿಯಲ್ಲಿ ಪ್ರಶ್ನಿಸುತ್ತಿದೆ.

16ರ ಹರೆಯದ ಬಲವಂತದ ವೇಶ್ಯೆಗಾರಿಕೆಯ ಸಂತ್ರಸ್ತ ಯುವತಿಯೊಬ್ಬಳು ಕೊಟ್ಟ ಮಾಹಿತಿಯನ್ನು ಅನುಸರಿಸಿ ನೋನು ಪಂಜಾಬನ್ ಳ ರಹಸ್ಯ ಅಡಗುದಾಣವನ್ನು ಪತ್ತೆ ಹಚ್ಚಿ ಆಕೆಯನ್ನು ಸೆರೆ ಹಿಡಿಯಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೊದಲಿಗೆ ಸಂತ್ರಸ್ತ ಯುವತಿ ಕೊಟ್ಟ ದೂರಿಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ತನ್ನನ್ನು ಕೊಲ್ಲಬಹುದು ಎಂಬ ಭೀತಿಯಲ್ಲಿ ಯುವತಿಯೂ ಭೂಗತಳಾಗಿದ್ದಳು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಎಸಿಪಿ ಲಾಂಬಾ ಅವರು ಕಳೆದ ನವೆಂಬರ್ ತಿಂಗಳಲ್ಲಿ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಿ ಆಕೆಯಿಂದ ಹಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು ನಂತರ ಕಾರ್ಯಾಚರಣೆ ನಡೆಸಿದ್ದರು.

2009ರಲ್ಲಿ ಸಂತ್ರಸ್ತ ಯುವತಿ 12 ವರ್ಷದವಳಾಗಿದ್ದಾಗ ಆಕೆಯನ್ನು ಅಪಹರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ನಂತರ ಆಕೆ 2014ರಲ್ಲಿ ತಪ್ಪಿಸಿಕೊಂಡು ಬಂದು ನಜಫ್ಗಡ ಪೊಲೀಸ್ ಠಾಣೆಯಲ್ಲಿ ಸೋನು ಪಂಜಾಬನ್ ಹಾಗೂ ಆಕೆಯ ದಲ್ಲಾಳಿಗಳ ವಿರುದ್ಧ ದೂರು ನೀಡಿದ್ದಳು.

Leave A Comment

ಸಾಮಾಜಿಕ

ಕಚೇರಿಗಳಿಗೆ ಬರಲಿದೆ ರೊಬೋ ಸಹಾಯಕ

ಸಾಮಾಜಿಕ

ಕಚೇರಿಗಳಿಗೆ ಬರಲಿದೆ ರೊಬೋ ಸಹಾಯಕ

By Editor
03:57:13 AM / Sun, Jan 21st, 2018
ನೆರವಿಗೆ ಕುಟುಂಬಸ್ಥರಿಂದ ಮನವಿ

ಸಾಮಾಜಿಕ

ಕುಡಿದ ಅಮಲಿನಲ್ಲಿ ಕಾರು ಚಾಲನೆ:
ನ್ಯೂಜಿಲೆಂಡ್‌ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು
By Editor
03:57:13 AM / Sun, Jan 21st, 2018